ಟಾಂಗ/ಜಟಕಾ ಗಾಡಿ!

ಜಟಕಾ ಗಾಡಿಗಳು ಇನ್ನೂ ನಮ್ಮ ರಸ್ತೆಗಳಲ್ಲಿ ಓಡಾಡ್ತಾ ಇದ್ದಾವೆ ಅಂದ್ರೆ ಅದು ಒಂದು ಆಶ್ಚರ್ಯದ ಸಂಗತಿ ಅಂತಾನೆ ಹೇಳಬಹುದು . "ಚಕ್ರ/ಗಾಲಿ" ಕಂಡು ಹಿಡಿದ ನಂತರ, ಮನುಷ್ಯ ಹಿಂತಿರುಗಿ ನೋಡಿಲ್ಲ. ಗಾಡಿಗಳ ಅನ್ವೇಷಣೆ/ಆವಿಷ್ಕಾರಗಳು ದಿನೇ ದಿನೇ ಹೆಚ್ಚುತ್ತಲೇ ಇದೆ. ಈಗಂತೂ ಮಂಗಳ ಗ್ರಹಕ್ಕೂ ಗಾಡಿ ಕಳುಹಿಸಿ ಬಿಟ್ಟಿದ್ದಾರೆ.

ನನಗೆ ಟಾಂಗ/ಜಟಕಾ ಗಾಡಿಯಲ್ಲಿ ಹೋದ ಅನುಭವ ಇಲ್ವೇ ಇಲ್ಲ. ಒಮ್ಮೆ ಹೋಗಬೇಕೆಂಬ ಆಸೆಯಂತೂ ಇದೆ.ಅದ್ಯಾವಾಗ
ಕುಲಾಯಿಸತ್ತೋ ನೋಡೋಣ.
ಈಗಿನ ಇಂಧನಗಳಿಂದ ಚಾಲಿತ ವಾಹನಗಳ ಸವಾರಿಗಿಂತ ಟುಕ್ಕುಟುಕ್ಕು ಅಂತ ನಿಧಾನವಾಗಿ ಸಾಗೋ ಜಟಕಾ ಬಂಡಿಯಲ್ಲಿ ಹೋಗೋ ಮಜಾ ಸವಿಯಲು ಕಾತುರದಿಂದ ಕಾಯುತಿರುವೆ .ಸಧ್ಯಕ್ಕೆ ಈ ಆಸೆ ಯಾಕೆ ಬಂತು ಅಂದ್ರೆ, ಇವತ್ತು ನಾನು ಆಫೀಸಿಗೆ ಬರೋವಾಗ ರಸ್ತೆಯಲ್ಲಿ ನಮ್ಮ ಟಾಟಾ ಇ೦ಡಿಕಾ ಗಾಡಿಯ ಮುಂದೆ ಸಾಗುತಿದ್ದ ಜಟಕಾ ಬಂಡಿಯೇ ಕಾರಣ.

ಅಲ್ಲೇ ನನ್ನ ಸೆಲ್ ಫೋನ್ ನಲ್ಲಿ ಕ್ಲಿಕ್ ಮಾಡಿದ ಫೋಟೋ ಇಲ್ಲಿ ಇದೆ.



ನಿಮಗೆ ಟಾಂಗಾದಲ್ಲಿ ಸವಾರಿ ಮಾಡಿದ ಅನುಭವ ಇದ್ರೆ ಹಂಚಿಕೊಳ್ಳಿ.   Gist: I want to know how it feels to get a ride in a "Tanga". I have not had an opportunity to sit in one of them all these years. I'd want to do this sometime in the future. That picture was clicked today on the way to my office. Yeah we still have a few Tanga's running in the city mainly to ply some passengers at times and luggage/carton boxes or parcels at other instances.

5 comments:

Rekha said...

ಅಶ್ವಿನಿ, ನಮ್ಮ garden city ನಲ್ಲಿ ಟಾಂಗ ಇಲ್ಲ ಸರಿ... ಆದ್ರೆ ನಮ್ಮ ಸಾಂಸ್ಕೃತಿಕ ನಗರದಲ್ಲಿ ಇನ್ನು ಇದೆ! So do experience whn u visit mysore... :)

Jack said...

Ashwini,

Do take a ride for the fun of it. This is so different from TONGAS which we have here.

Take care

Sum said...

Ahhh.... i've gone on a tonga a couple of times, but long back.... Love it...

ಗಿರೀಶ್.ಎಸ್ said...

ಅಶ್ವಿನಿ,ನಾನು ಹಾಸನದಲ್ಲಿ ಪ್ರೈಮರಿ ಅಲ್ಲಿದ್ದಾಗ,ನನ್ನ ಕೆಲವು ಸ್ನೇಹಿತರು ಟಾಂಗಾ ಗಾಡಿಯಲ್ಲಿ ಬರುತ್ತಿದ್ದರು(ಹೀಗೆಲ್ಲಾ ಸ್ಕೂಲ್ ಬಸ್ ಗಳು ಇವೆ)..ಒಂದು ದಿನ ನನ್ನ ಸ್ನೇಹಿತನ ಹತ್ತಿರ ಅದರಲ್ಲಿ ಹೋಗುವ ಆಸೆಯನ್ನು ವ್ಯಕ್ತ ಪಡಿಸಿದಾಗ,ಅವನು ಆ ಟಾಂಗಾದವನಲ್ಲಿ ಕೇಳಿಕೊಂಡ,ಆಗ ನನ್ನನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿದ್ದರು...ಅದರಲ್ಲಿ ಹೋಗುವ ಮಜಾನೆ ಬೇರೆ...

ಅಶ್ವಿನಿ/ Ashwini said...

@Rekha: hmm howdu, mysore nalli taanga irodu gottu, allige next time bandaaga hattodu guarantee :)

@jack: Oh is it... Need to check it out.

@Sum: Hmmm I've heard its so much fun and a thing to do without a miss

@Girish: Oh andre neevu primary yalli oduvaagale taangadalli savaari maadiddeera anta aayitu.Sooper!

Journey of Love: Chapter 8: Love in Full Bloom

As the train neared Bangalore, Arjun and Latha found themselves lost in each other's gaze, their hearts overflowing with love and gratit...